ಆರೋಗ್ಯ ಬಜೆಟ್ ವಿಶ್ಲೇಷಣೆ ಮತ್ತು ಬೆಂಗಳೂರು ನಗರ ಜಿಲ್ಲಾ ಸಭೆಗೆ ಸಾರ್ವತ್ರಿಕ ಆರೋಗ್ಯ ಆಂದೋಲನ ತಮ್ಮನ್ನು ಆಹ್ವಾನಿಸುತ್ತದೆ
ಕರ್ನಾಟಕ ಆರೋಗ್ಯ ಬಜೆಟ್ ವಿಶ್ಲೇಷಣೆಯ ಓರಿಯಂಟೇಶನ್ ಸೆಷನ್
ಆಗಸ್ಟ್ 3, 2024 ರಂದು (ಶನಿವಾರ)
ಬೆಳಿಗ್ಗೆ 930 ರಿಂದ ಮಧ್ಯಾಹ್ನ 1ರ ವರೆಗೆ
ಸಂಪನ್ಮೂಲ ವ್ಯಕ್ತಿ: ಶ್ರೀ ಮಧುಸೂಧನ್, ಸಿಬಿಪಿಎಸ್
SAA-K ನಿಮ್ಮನ್ನು ಅದೇ ಸ್ಥಳದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಬೆಂಗಳೂರು ನಗರ ಜಿಲ್ಲಾ ಸಭೆಗೆ ಆಹ್ವಾನಿಸುತ್ತದೆ
ಪುಷ್ಪಾ ಅವರ ಟಿಪ್ಪಣಿಗಳು
ಬೆಳಿಗ್ಗೆ ಸಭೆ ಶುರುವಾಗುವ ಮುನ್ನ ನೀಲಯ್ಯ ರವರು ಸಾರ್ವಜನಿಕ ಆರೋಗ್ಯ ಆಂದೋಲನ ಕರ್ನಾಟಕದಿಂದ ಒಂದು ವಿಷಯದ ಕುರಿತು ಚರ್ಚೆ ಮಾಡಬೇಕೆಂದು ತುಂಬಾ ದಿನಗಳಿಂದ ಅಂದುಕೊಂಡಿದ್ದವು ಆ ವಿಷಯ ಏನೆಂದರೆ ಆರೋಗ್ಯದ ವಿಚಾರದಲ್ಲಿ ಬಜೆಟ್ ಮಂಡನೆ ತಿಳಿದುಕೊಳ್ಳುವುದು ಹೇಗೆ ಎಂಬುದು ಅದರ ಕುರಿತು ಯಾರಾದರೂ ಒಬ್ಬರು ಸಂಪನ್ಮೂಲ ವ್ಯಕ್ತಿಯನ್ನು ಕರೆದು ಮಾಹಿತಿ ಪಡೆದುಕೊಳ್ಳಬೇಕು ಎಂಬುದನ್ನು ಚರ್ಚಿಸಲಾಗಿತ್ತು ಆ ಸಮಯದಲ್ಲಿ ಡಾಕ್ಟರ್ ಗೋಪಾಲ್ ದಾಬಡೇರವರು ಮಧುಸೂದನ್ ರವರನ್ನು ಭೇಟಿ ಮಾಡಿ ಅವರನ್ನು ಈ ಸಭೆಗೆ ಬಂದು ನಮಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು ಆದ ಕಾರಣ ಇಂದು ಅವರು ಈ ಸಭೆಯಲ್ಲಿ ನಮ್ಮೊಂದಿಗೆ ಅವರು ನಡೆಸಿರುವಂತಹ ಆರೋಗ್ಯ ಬಜೆಟ್ ಮಂಡಳಿಯ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಬಂದಿದ್ದರು ಎಂಬ ವಿಷಯವನ್ನು ತಿಳಿಸುವ ಮೂಲಕ ಅವರಿಗೆ ಸ್ವಾಗತವನ್ನು ಕೋರಿದರು.
ನಂತರ ನಿಶಾ ಗುಳುರು ರವರು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕವು ಡಿಸೆಂಬರ್ 22 2022 ರಂದು ಶುರುವಾದಂತದ್ದು. ಈ ಆಂದೋಲನದಲ್ಲಿ ಸುಮಾರು 30 ರಿಂದ 35 ಸಂಘಟನೆಗಳು ಹಾಗೂ ಪ್ರಗತಿಪರ ಚಿಂತಕರು ಸೇರಿ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರು ಕೂಡ ಇದನ್ನು ಇದರಲ್ಲಿ ಸೇರಿಕೊಂಡು ಒಂದು ಆಂದೋಲನವಾಗಿ ರಚನೆ ಮಾಡಿಕೊಂಡಿದ್ದಾರೆ.
ಎಂದರೆ ಆರೋಗ್ಯವು ಪ್ರತಿಯೊಬ್ಬರ ಹಕ್ಕು. ಸಾರ್ವಜನಿಕವಾಗಿ ಎಲ್ಲರಿಗೂ ಆರೋಗ್ಯ ಎನ್ನುವುದು ಉಚಿತವಾಗಿ ಸಿಗಬೇಕು ಹಾಗಾಗಿ ಸಾರ್ವಜನಿಕ ಆರೋಗ್ಯ ಅನ್ನೋದು ವ್ಯಾಪಾರ ಆಗ್ತಿದೆ ಜೊತೆಗೆ ಸಿಬ್ಬಂದಿಗಳಿಗೆ ಕೂಡ ಒತ್ತಡ ಹೆಚ್ಚು ಆಗ್ತದೆ ಇದಕ್ಕೆ ಕಾರಣವೇನು ಇದನ್ನು ನಾವು ಯಾವ ರೀತಿಯಲ್ಲಿ ಪರಿಹರಿಸಿಕೊಳ್ಳಬಹುದು ಎಂಬುದಕ್ಕಾಗಿ ಈ ಆಂದೋಲನವು ಹುಟ್ಟಿಕೊಂಡಿದೆ ಎಂಬ ಅಂಶವನ್ನು ತಿಳಿಸಿದರು.
ಈಗಾಗಲೇ ಇರುವಂತಹ ಎಲ್ಲಾ ಸಂಘಟನೆ ಮತ್ತು ಸಂಸ್ಥೆಗಳು ಸೇರಿ ಆಂದೋಲನ ಶುರುಮಾಡಿದ್ದಾಗಿದೆ. ರಾಜ್ಯ ಸಮಿತಿಯಲ್ಲಿ ಒಟ್ಟು 40 ಜನರಿದ್ದಾರೆ.
ಹಾಗೆಯೇ ಕೆಲವೊಂದು ಉದಾಹರಣೆಗಳನ್ನು ನೀಡಿದರು. ಪಬ್ಲಿಕ್ ಆಕ್ಷನ್ ನಲ್ಲಿ ನಾವು ಅಧಿವೇಶನದಲ್ಲಿ ಎಂಎಲ್ಎ ಅವರನ್ನು ಭೇಟಿ ಮಾಡಿ ವಿಷಯವನ್ನು ಅವರಿಗೆ ತಿಳಿಸಲಾಗಿದೆ.
ಎಲ್ಲೆಲ್ಲಿ ಹೋರಾಟಗಾರರು ಇರುತ್ತಾರೆ ಅಲ್ಲಲ್ಲಿ ಕೂಡ ನಾವು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದೇವೆ.
ಜೊತೆಗೆ ಬೆಳಗಾವಿನಲ್ಲಿ ಚಳಿಗಾಲ ಅಧಿವೇಶನದ ಸಮಯದಲ್ಲಿ ನಾವು ಒಂದು ರೀತಿಯಲ್ಲಿ ಆರೋಗ್ಯದ ವಿಷಯದ ಕುರಿತು ಅಲ್ಲಿನವರಿಗೆ ಮನವಿ ಮಾಡಿದ್ದು ಮತ್ತು ಎಲ್ಲಾ ಜನರು ಒಟ್ಟಾಗಿ ಸೇರಿ ಒಗ್ಗಟ್ಟಿನಿಂದ ಆರೋಗ್ಯ ಹಕ್ಕಿನ ಕುರಿತು ನಾವು ಹೋರಾಟ ಮಾಡಿದ್ದು ಕೂಡ ಇಲ್ಲಿ ಹಂಚಿಕೊಂಡರು.
ಸುಮಾರು ವಾಲೆಂಟಿಯರು ಸೇರಿ ಆಸ್ಪತ್ರೆಗಳಲ್ಲಿ ಸರ್ವೆ ಮಾಡಿದ್ದಾರೆ ಈ ಸರ್ವೆಯು. ಒಂದು ಗಂಟೆಯಲ್ಲಿ ಎಷ್ಟು ಜನರಿಗೆ ವೈದ್ಯರು ಖಾಸಗಿ ಮೆಡಿಕಲ್ ಶಾಪ್ ಗಳಲ್ಲಿ ಔಷಧಿಗಳನ್ನು ಖರೀದಿಸಲು ತಿಳಿಸಿದ್ದಾರೆ ಎಂಬುದನ್ನು ಕುರಿತದ್ದಾಗಿತ್ತು.
ಸರ್ವೆಯನ್ನು 4 ರಿಂದ 5 ಸಂಸ್ಥೆಗಳು ಸೇರಿ ಮಾಡಿರುವಂತದ್ದು. ಅದು ಒಂದು ವಾರದಲ್ಲಿ ಒಂದು ದಿನ ಈ ಸರ್ವೆ ಮಾಡಿ ಮಾಹಿತಿಯನ್ನು ಪಡೆದುಕೊಂಡಿರುವಂತದ್ದು.
ಯಾಕೆಂದರೆ ನಮಗೆ ಇದು ಕೇಸ್ ಸ್ಟಡಿ ಮಾಡಲು ಅನುಕೂಲವಾಗುತ್ತದೆ ಉದಾಹರಣೆಗೆ ಲಂಚ ತೆಗೆದುಕೊಳ್ಳುವುದು ಕೂಡ ಗಮನಿಸಬಹುದಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಯ (ಈ ಸಮಯದಲ್ಲಿ ದುಡಿಯುವ ವರ್ಗದ ಜನರಿಗೆ ಯಾವುದೇ ರೀತಿಯ ಉಪಯೋಗವಾಗುತ್ತಿರಲಿಲ್ಲ ಹಾಗಾಗಿ ಇದನ್ನು ಕೂಡ ಗಮನಿಸಿದ್ದೇವೆ)
ಸರ್ಕಾರಿ ಯಲ್ಲಿ ವೈದ್ಯರಾಗಿರುವವರೇ ಸಂಜೆ ಸಮಯ ಖಾಸಗಿ ಕ್ಲಿನಿಕ್ ಗಳನ್ನು ಇಟ್ಟುಕೊಂಡು ಯಾವ ರೀತಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂಬುದು ಕೂಡ ಇದರಲ್ಲಿ ತಿಳಿದು ಬಂದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಎಷ್ಟು ಗಂಟೆಗಳ ಅವಧಿಯವರೆಗೂ ಇರುತ್ತದೆ ಎಂಬುದನ್ನು ನಾವು ಜಿಪಿಎಸ್ ಮೂಲಕ ದಾಖಲೆಗಳನ್ನು ಕೂಡ ಸಂಗ್ರಹಿಸಿದ್ದೇವೆ.
ಇದರ ಜೊತೆಗೆ ರಾಜಸ್ಥಾನದ ಮಾಡಲ್ ಕೂಡ ಉದಾಹರಣೆಯಾಗಿ ತೆಗೆದುಕೊಂಡಿದ್ದೇವೆ.
ರಾಜ್ಯ ಸಮಿತಿ ಸಭೆಗಳಾಗುತ್ತಿರುತ್ತವೆ ಬೆಂಗಳೂರಿನ 8 ರಿಂದ 9 ಸಂಸ್ಥೆಗಳು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಚುನಾವಣಾ ಪೂರ್ವವಾಗಿ ಕೂಡ ನಾವು ಕೆಲಸವನ್ನು ನಿರ್ವಹಿಸಿದ್ದೇವೆ ಎಂಬುದರ ಬಗ್ಗೆ ತುಂಬಾ ಸರಳವಾಗಿ ಮತ್ತೊಮ್ಮೆ ಈ ಸಭೆಯಲ್ಲೂ ಕೂಡ ತಿಳಿಸಿದ್ದರು.
ನಂತರ ಮಧುಸೂದನ್ ರವರು ಮಾತನಾಡಿದರು.
ಸಿ ಬಿ ಪಿ ಐ ಎನ್ ಅಧ್ಯಯನದ ವರದಿ ಹೀಗಿದೆ.
ಆರೋಗ್ಯ ಶಿಕ್ಷಣ ಮತ್ತು ಸಾರ್ವಜನಿಕ ವೆಚ್ಚದ ಬಗ್ಗೆ ತಿಳಿಸಿದರು.
ಸಂಶೋಧನಾ ವರದಿಗಳನ್ನು ಹಂಚಿ ಹಂಚಿಕೊಂಡರು.
ಪ್ರತಿಯೊಂದುಕ್ಕೂ ಕೂಡ ಬಜೆಟ್ ಅನ್ನುವುದು ಬಹಳ ಮುಖ್ಯ ಆಗುತ್ತದೆ. ಆರೋಗ್ಯ ಆಗಿರಬಹುದು ಶಿಕ್ಷಣ ಇತರೆ ವಿಷಯಗಳ ಬಗ್ಗೆ ಸರ್ಕಾರದಿಂದ ಯಾವ ಯಾವ ರೀತಿಯಲ್ಲಿ ಬಜೆಟ್ ಮಂಡನೆ ಆಗುತ್ತದೆ ಅದನ್ನು ಯಾವ ರೀತಿಯಲ್ಲಿ ಖರ್ಚು ವೆಚ್ಚಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಪಿಪಿಟಿ ಮೂಲಕ ಹಂಚಿಕೊಂಡರು.
ಬಜೆಟ್ ಒಂದು ರೀತಿಯಲ್ಲಿ ನಮಗೆಲ್ಲರಿಗೂ ಇರುವಂತಹ ಅಸ್ತ್ರ. ಎಂದರೆ ಇದರ ಬಗ್ಗೆ ನಾವು ಸರಿಯಾದ ರೀತಿಯಲ್ಲಿ ಮಾಹಿತಿ ಪಡೆದುಕೊಂಡಾಗ ನಾವು ಪ್ರಶ್ನಿಸುವವರಾಗುತ್ತೇವೆ. ಪ್ರಶ್ನೆ ಮಾಡಲು ಶುರು ಮಾಡಿದಾಗ ಆಗ ಸರ್ಕಾರ ಕೂಡ ಎಚ್ಚೆತ್ತುಕೊಳ್ಳಲು ಸಹಾಯವಾಗುತ್ತದೆ ಎಂಬುದನ್ನು ತಿಳಿಸಿದರು.
ಹಾಗಾದ್ರೆ ಬಜೆಟ್ ಅಂದರೇನು? ಬಜೆಟ್ ನ ಪ್ರಕ್ರಿಯೆಗಳು ಹೇಗಿರುತ್ತವೆ. ಹಿಟ್ಟನ್ನು ನಾವು ಹಲವಾರು ರೀತಿಯ ಆಯಾಮಗಳಲ್ಲಿ ಯಾವ ಯಾವ ರೀತಿಯಲ್ಲಿ ನೋಡಬಹುದು ಎಂಬುದನ್ನು ತಿಳಿಸಿದರು.
ಜೊತೆಗೆ ರಾಜ್ಯ ಸರ್ಕಾರಕ್ಕೆ ಯಾವ ಯಾವ ರೀತಿಯಲ್ಲಿ ಆದಾಯದ ಮೂಲಗಳಿವೆ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳು ಸಿಕ್ಕಾಗ ಅದನ್ನು ಹೇಗೆ ನಾವು ಅರ್ಥೈಸಿಕೊಳ್ಳಬಹುದು ಎಂಬುದನ್ನು ಸಹ ಹಂಚಿಕೊಂಡರು.
ರಾಜ್ಯ ಸರ್ಕಾರದ ಬಜೆಟ್ ಅಧ್ಯಯನ ಹೇಗಿದೆ ಎಂಬುದನ್ನು ಪಿಪಿಟಿ ಮೂಲಕ ತೋರಿಸಿದರು.
ಜಿಲ್ಲಾ ಮತ್ತು ತಾಲೂಕು ಅಂಕಿ ಅಂಶಗಳು ಹೇಗಿದೆ ಎಂಬುದನ್ನು ನೋಡಿದೆವು.
ಜಿಲ್ಲಾ ಪಂಚಾಯಿತಿಗಳ ಆಡಿಟ್ ವರದಿ ಯಾವ ರೀತಿನಲ್ಲಿ ಇರುತ್ತದೆ ಎಂಬ ಅಂಶವನ್ನು ಕೂಡ ತಿಳಿಸಿದರು.
ಹಾಗೆಯೇ ಜಿಲ್ಲಾ ಪಂಚಾಯಿತಿನಲ್ಲಿ ಮಾತ್ರ ಅಷ್ಟೇನಾ ಅಥವಾ ಇನ್ನು ಬೇರೆ ಬೇರೆ ರೀತಿಯಲ್ಲಿ ಹೇಗೆ ಎಂಬುದನ್ನು ಕೇಳಿದಾಗ.
ನಾವು ಇದನ್ನು ಎರಡು ಸೆಕ್ಟರ್ ನಲ್ಲಿ ನೋಡಬಹುದು ಒಂದು ರಾಜ್ಯ ಮತ್ತೊಂದು ಜಿಲ್ಲಾ ವಲಯ.
ರಾಜ್ಯ ವಲಯದಲ್ಲಿ ಡಿಸ್ಟ್ರಿಕ್ಟ್ ಸರ್ಜನ್ ಮೂಲಕ ನೋಡಬಹುದು.
ಹಾಗೆಯೇ ಅವರು ನೀಡುವ ವರದಿಗಳನ್ನು ಗಮನಿಸಬಹುದು.
ಬಜೆಟ್ ಸಕಾಲದಲ್ಲಿ ಬರುತ್ತಿದೆಯೇ ಬಂದಂತಹ ಹಣವು ಸರಿಯಾಗಿ ಖರ್ಚು ಆಗುತ್ತಿದೆಯೇ ಎಂಬುದನ್ನು ಹೇಗೆ ತಿಳಿಯೋದು ಅನ್ನೋದನ್ನ ಅವರು ಸಿದ್ಧಪಡಿಸಿದಂತ ಪಿಪಿಟಿಯಲ್ಲಿ ತಿಳಿಸಿದರು.
ಹಾಗೆ ಈ ಬಜೆಟ್ ಕಾರ್ಯಕ್ರಮಗಳಿಗೂ ಕೂಡ ಬರುತ್ತದೆಯೇ ಎಂಬ ಅಂಶವನ್ನು ಕೂಡ ಚರ್ಚಿಸಿದರು.
ಈ ಬಜೆಟ್ ಸರಿಯಾಗಿ ಬಳಸದೆ ಹೋದರೆ ಆ ಉದಾಹರಣೆಗೆ ಶಾಲೆ ಕುರಿತ ವೆಚ್ಚ ಸರಿಯಾಗಿ ಆಗಬೇಕು ಅಂದಾಗ ರಸ್ತೆ ಕೂಡ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಆಗಬೇಕಾಗುತ್ತದೆ ಎಂಬ ಸೂಕ್ಷ್ಮ ವಿಚಾರವನ್ನು ಅರ್ಥೈಸಿದರು.
ನೀರು ನೈರ್ಮಲ್ಯಕ್ಕೆ ವೆಚ್ಚ ಮಾಡದೆ ಇದ್ದರೆ ಈ ಬಜೆಟ್ ವ್ಯರ್ಥವಾಗುತ್ತದೆ ಎಂಬುದನ್ನು ಕೂಡ ತಿಳಿದುಕೊಂಡೆವು.
ಪೂರ್ಣ ಪ್ರಮಾಣದ ವೆಚ್ಚ ಎಷ್ಟಿದೆ. ಪೂರ್ಣಪ್ರಮಾಣದಲ್ಲಿ ಆದಂತಹ ಖರ್ಚು ವೆಚ್ಚಗಳು ಎಷ್ಟಿದೆ. ಖರ್ಚು ಆಗದೇ ಇರುವಂತಹ ಹಣ ಎಷ್ಟಿದೆ ಇದನ್ನು ಪ್ರಶ್ನೆ ಮಾಡುವವರು ಯಾರು? ಇತ್ಯಾದಿ ಅಂಶಗಳ ಬಗ್ಗೆ ಗಮನಿಸಲು ಸಹಾಯವಾಯಿತು.
ಜನಪ್ರತಿನಿಧಿಗಳಿಗೆ ನಾವು ಕೇಳುವಂತಾಗಬೇಕು ಆಗ ಅವರು ಸರ್ಕಾರವನ್ನು ಕೂಡ ಪ್ರಶ್ನೆ ಮಾಡಲು ಸುಲಭವಾಗುತ್ತದೆ ಎಂದರು.
ನಾವು ಈ ಬಜೆಟ್ ವಿಷಯವನ್ನು ತಿಳಿಸುವಾಗ ಅಥವಾ ಕೇಳುವಾಗ ಆರೋಗ್ಯದ ವಿಚಾರದಲ್ಲಿ ಒಂದು ಜಿಲ್ಲೆ ಅಥವಾ ತಾಲೂಕು ಚುನಾವಣಾ ಕ್ಷೇತ್ರಕ್ಕೆ ನಾವು ಹೋಲಿಕೆ ಮಾಡಿ ನಂತರ ಏಕೆ ಏನು ಎಂಬುದರ ಬಗ್ಗೆ ಪ್ರಶ್ನಿಸಬೇಕಾಗುತ್ತದೆ ಹಾಗೆ ನಾವು ಕೂಡ ಇದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಮಾಹಿತಿಯನ್ನು ಪಡೆಯಬೇಕಾಗುತ್ತದೆ.
ಉದಾಹರಣೆಗೆ ಯಾವ ತಾಲೂಕಿನಲ್ಲಿ ಹೆಚ್ಚು ವೆಚ್ಚವಾಗಿದೆ ಅಂತ ನೋಡಬೇಕು ಹಾಗೆಯೇ ಯಾವ ತಾಲೂಕಿನಲ್ಲಿ ಅತಿ ಕಡಿಮೆ ವೆಚ್ಚವಾಗಿದೆ ಎಂದು ಕೂಡ ಗಮನಿಸಬೇಕು.
ಈ ವಿಷಯಗಳು ಚರ್ಚಿಸುವಾಗ ಮನೋಹರ್ ರವರು ಬೆಂಗಳೂರಿನಲ್ಲಿ ಶ್ರೀಮಂತರು ಇರುವ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯವಸ್ಥೆ ಸರಿ ಇದೆ ಅಲ್ಲಿ ಯಾವುದೇ ರೀತಿಯ ಸಿಬ್ಬಂದಿಯ ಕೊರತೆಯಾಗಲಿ ಮತ್ತೊಂದರ ಕೊರತೆಯಾಗಲಿ ಇರುವುದಿಲ್ಲ. ಆದರೆ ಬಡವರ ಏರಿಯಾದಲ್ಲಿ ಈ ವ್ಯವಸ್ಥೆ ಸರಿಯಾಗಿ ಇಲ್ಲ ಯಾಕೆ ಹೀಗೆ ಎಂದು ಪ್ರಶ್ನಿಸಿದರು.
ಆಗಮಧುಸೂದನ್ ರವರು ಇದಕ್ಕೆ ಪೂರಕವಾದಂತಹ ಅಂಕೆ ಅಂಶಗಳು ನಮಗೆ ಬೇಕಾಗುತ್ತವೆ ಯಾಕೆಂದರೆ ಯಾವುದೇ ದಾಖಲೆಗಳು ಸಾಕ್ಷಿಗಳು ಇಲ್ಲದೆ ನಾವು ಮಾತನಾಡಲು ಹೋದಾಗ ಅಷ್ಟು ಪರಿಣಾಮಕಾರಿಯಾಗಿ ನಮಗೆ ಪ್ರಶ್ನೆಸಲು ಆಗುವುದಿಲ್ಲ ಜೊತೆಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಓ ಪಿ ಡಿ ಮತ್ತು ಎ ಪಿ ಡಿ ಗಳ ಹಾಜರಾತಿಯನ್ನು ನಾವು ಪಡೆದುಕೊಳ್ಳಬೇಕು ಹಾಗೆ ಗಮನಿಸಬೇಕು ನಂತರ ಚರ್ಚಿಸಿ ಅದನ್ನು ಯಾವ ರೂಪದಲ್ಲಿ ಕೈಗೊಳ್ಳಬೇಕು ಎಂಬುದನ್ನು ಎಲ್ಲರೂ ಸೇರಿ ನಿರ್ಧರಿಸಬೇಕು ಎಂಬುದನ್ನು ತಿಳಿಸಿದರು.
ಯಾಕೆ ಈ ಪ್ರಶ್ನೆ ಬಂದಿತ್ತು ಎಂದರೆ ಶ್ರೀಮಂತರ ಏರಿಯಾದಲ್ಲಿ ಬಹಳಷ್ಟು ಕೆಲಸ ಆಗ್ತಿವೆ, ಆದರೆ ಬಡವರ ಪ್ರದೇಶದಲ್ಲಿ ಆಗುತ್ತಿಲ್ಲ ಎಂದಾಗ ಶ್ರೀಮಂತರ ಏರಿಯಾದಲ್ಲಿ ಜನಪ್ರತಿನಿಧಿಗಳು ವಾಸವಿದ್ದಾರೆ ಹಾಗೆಯೇ ಒಂದು ರೀತಿಯಲ್ಲಿ ಮೇಲ್ವರ್ಗ ಕೆಳವರ್ಗ ಈ ಅಂಶವು ಕೂಡ ಕಂಡು ಬರುತ್ತದೆ ಎಂಬುದನ್ನು ಮನವರಿಕೆ ಮಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ವ್ಯವಸ್ಥೆಗಳು ಸಮರ್ಪಕವಾಗಿ ಸಂಪೂರ್ಣವಾಗಿ ಲಭ್ಯವಾಗ ಬೇಕು ಎಂಬುದೇ ನಮ್ಮ ಉದ್ದೇಶ ಎಂದು ಮನೋಹರ್ ಸರ್ ಅವರು ತಿಳಿಸಿದರು.
ರಾಜೇಶ್ ರವರು ನಾವು ಒಂದು ಅಧ್ಯಯನವನ್ನು ಕೂಡ ಮಾಡಿದ್ದೇವೆ ಅದು ಸಿಬ್ಬಂದಿಯ ಸರ್ವೆ ಕೂಡ ಆಗಿದೆ ಹಾಗೆಯೇ ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ಯಾವ ಯಾವ ರೀತಿಯಲ್ಲಿ ವ್ಯವಸ್ಥೆ ಇದೆ ಎಂಬುದರ ಕೂಡನು ಅಧ್ಯಯನ ಮಾಡಿದ್ದೇವೆ ಎಂದು ತಿಳಿಸಿದರು.
ಹೀಗಿರುವಾಗ ರಿಜಿಸ್ಟರ್ ನಂಬರ್ ಗೂ ಮತ್ತು ಇನ್ ಪೇಷಂಟ್ ನಂಬರ್ ಕೊಡು ಬಹಳ ವ್ಯತ್ಯಾಸವಿದೆ ಎಂಬ ಸೂಕ್ಷ್ಮ ವಿಚಾರವನ್ನು ಕೂಡ ತಿಳಿಸಿದರು.
ನಾವು ಬೇಸಿಕ್ ಆಗಿ ನೋಡಿದರೆ ಮೆಡಿಸನ್ ನಿಂದ ಸಿಬ್ಬಂದಿವರೆಗೂ ಯಾವ ಯಾವ ರೀತಿಯಲ್ಲಿ ಸಮಸ್ಯೆಗಳಿದ್ದಾವೆ ಈ ಸಮಸ್ಯೆಗಳಿಗೆ ಕಾರಣವೇನು ಅದನ್ನು ಪರಿಹಾರ ಮಾಡುವಲ್ಲಿ ನಮ್ಮ ನಿಲುವೇನು ಎಂಬ ಸೂಕ್ಷ್ಮ ಅಂಶವೂ ಕೂಡ ಇಲ್ಲಿ ಕಂಡುಬಂದಿತು..
ಇದರ ಜೊತೆಗೆ ಮಲೆನಾಡು ಕೇರಳ ಈ ಕಡೆ ಪ್ರದೇಶಗಳಲ್ಲಿ ಸರಿಯಾದಂತಹ ಆರೋಗ್ಯ ವ್ಯವಸ್ಥೆ ಇದೆ.
ಆದರೆ ಬೇರೆ ಕಡೆಯಲ್ಲಿ ಈ ವ್ಯವಸ್ಥೆ ಇಲ್ಲ ಎಂಬುದು ಕೂಡ ಚರ್ಚಿಸಿದರು
ಇಲ್ಲಿ ಪ್ರತಿ ವಾರ್ಡ್ ಅಂತ ಹೋದರೆ ಯಾವ ಯಾವ ವಾರ್ಡಿಗೆ ಎಷ್ಟು ಹಣ ಹೋಗುತ್ತಿದೆ ಅಥವಾ ಯಾವ ಯಾವ ಜಿಲ್ಲೆಗೆ ಎಷ್ಟು ಹಣ ಅಥವಾ ಯಾವ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಷ್ಟು ಹಣ ಹೋಗುತ್ತದೆ ಎಂಬುದನ್ನು ಕೂಡ ಚಿಂತನೆ ಮಾಡಲು ಸೂಚಿಸಿದರು.
ಇದರ ಜೊತೆಗೆ ಇಲ್ಲಿರುವಂತಹ ಎಲ್ಲಾ ಸಂಸ್ಥೆಗಳು ಬಡಜನರ ಸ್ಥಳಗಳಲ್ಲಿ ಕೆಲಸ ಮಾಡುತ್ತಿವೆ ಹಾಗಾಗಿ ನಮಗೆ ಈ ಎಲ್ಲಾ ವಿಚಾರದ ಬಗ್ಗೆ ಆತಂಕವಿದೆ ಹಾಗೆ ಈ ಬಡವರಿಗೆ ಆರೋಗ್ಯ ಸುಧಾರಿಸಲು ನಮಗೆ ಬೇರೆ ಬೇರೆ ರೀತಿಯಲ್ಲಿ ವಿಷಯಗಳು ತಿಳಿದು ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಎಂಬುದರ ಬಗ್ಗೆ ಕೂಡ ಚರ್ಚೆ ಆಯಿತು
ರಾಜ್ಯ ಸರ್ಕಾರ ಮತ್ತು ಮಹಾನಗರ ಪಾಲಿಕೆಯಲ್ಲಿ ಯಾವ ರೀತಿಯ ಬಜೆಟ್ ಮಂಡನೆ ಇದೆ.
ಆಗ ರಾಜೇಶ್ ರವರು ಒಂದು ಉದಾಹರಣೆಯನ್ನು ತಿಳಿಸಿದರು ನಾಯಿಂದ ಕಚ್ಚಿಸಿಕೊಂಡವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ದೊರೆಯಲಿಲ್ಲ ಜೊತೆಗೆ ಔಷಧಿ ಕೂಡ ದೊರೆಯಲಿಲ್ಲ ಆಗ ನಾವು ಎಂ ಓ ಎಚ್ ಇವರ ಬಳಿ ಹೋಗಿ ಮಾತನಾಡಿದಾಗ ಅವರು ಕೂಡಲೇ ನಾಯಿ ಔಷಧಿಗೆ ಹಣವನ್ನು ನೀಡಿದರು ನಂತರ ನಾಯಿಂದ ಕಚ್ಚಿಸಿಕೊಂಡವರಿಗೆ ಚಿಕಿತ್ಸೆ ದೊರೆಯಿತು ಎಂಬ ವಿಷಯವನ್ನು ಹಂಚಿಕೊಂಡರು. ವಿಷಯ ತನ್ನದೇ ಆದರು ತುಂಬಾ ಗಂಭೀರವಾದಂತಹ ವಿಷಯವಾಗಿದೆ ಎಂಬುದನ್ನು ಗಮನಿಸಿದೆವು.
ನಾವು ಒಂದು ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಥವಾ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೋಗಿ ಕೇಳಿದಾಗ ಔಷಧಿ ಸಿಗುತ್ತಿಲ್ಲ ಯಾಕೆ ಎಂದಾಗ ನಮಗೆ ಯಾವುದೇ ರೀತಿಯಾದಂತಹ ಔಷಧಿಗೆ ಸಂಬಂಧಪಟ್ಟಂತೆ ಹಣ ಬರುತ್ತಿಲ್ಲ ಎಂದು ಹೇಳುತ್ತಾರೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡರು
ಒಟ್ಟು ಸಂಚಿತ ನಿಧಿಗೆ ಹಣ ಬಂದಂತೆ ಮಾತ್ರ. ಹಣ ಬಂದಾಗ ಅದನ್ನು ನಾವು ಬಳಸಿಕೊಳ್ಳಬಹುದು ಆದರೆ ಕೆಲವರು ಇದಕ್ಕೆ ಲೆಕ್ಕವನ್ನು ಕೊಡಬೇಕು ಎಂದು ಅದನ್ನು ಖರ್ಚು ಮಾಡದೆ ವಾಪಸ್ ಕಳಿಸುವುದು ಕೂಡ ಉಂಟು ಎಂಬ ಅಂಶವನ್ನು ತಿಳಿಸಿದರು.
ಒಂದು ವೇಳೆ ಹಣ ಬರಲಿಲ್ಲ ಅಂದರೆ ಸರ್ಕಾರಕ್ಕೆ ಬರುತ್ತದೆ ಎಂದರು
ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೂಲಕ ತುಲನಾತ್ಮಕ ಅಧ್ಯಯನ ಮಾಡಬೇಕಾಗುತ್ತದೆ ನಾವುಗಳು ಎಂಬುದನ್ನು ಕೂಡ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯ ಬಜೆಟ್ ಎನ್ನುವುದು ಹೇಗಿದೆ ಎಂಬುದನ್ನು ವಿವರಿಸಿದರು.
ಸಾರ್ವಕಾಲಿಕ ಸತ್ಯವನ್ನು ಹೊರಗಿಟ್ಟು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಕೂಡ ತಿಳಿಸಿದರು
ಮೆಡಿಕಲ್ ಗೆ ಬೇರೆ ಬಜೆಟ್ ಇರುತ್ತದೆ. ಬಜೆಟ್ ಪ್ರಕ್ರಿಯೆ ಮತ್ತು ಡಾಕ್ಯುಮೆಂಟ್ಗಳನ್ನು ಕೂಡ ನಾವು ಪರೀಕ್ಷಿಸಬೇಕಾಗುತ್ತದೆ ಎಂದರು.
ಆನ್ಲೈನ್ ನಲ್ಲಿ ಆರ್ಥಿಕ ಇಲಾಖೆ (ಬಜೆಟ್ ಮಂಡನೆ) ನೋಡಬಹುದು
4210 ನಲ್ಲಿ ಮೆಡಿಕಲ್ ಮತ್ತು ಪಬ್ಲಿಕ್ ಹೆಲ್ತ್ ಗೆ ಸಂಬಂಧಪಟ್ಟ ಹಾಗೆ ಇದೆ
ಇನ್ಸೂರೆನ್ಸ್ ರಾಜ್ಯ ಸರ್ಕಾರದಿಂದ ಎಷ್ಟು ಹೋಗ್ತಿದೆ ಎಂಬ ಪ್ರಶ್ನೆ ಬಂದಾಗ ಇನ್ಸೂರೆನ್ಸ್ ಜಾಸ್ತಿ ಆಗಿಬಿಟ್ಟಿದೆ ಎಂಬ ಮಾಹಿತಿಯನ್ನು ಕೂಡ ತಿಳಿಸಿದರು.
ಇದರಲ್ಲಿ ಪುರುಷರು ಮತ್ತು ಮಹಿಳೆಯರು ಯಾವ ತರಹ ಬಳಸಿಕೊಳ್ಳುತ್ತಿದ್ದಾರೆ ಎಂದಾಗ
ಒಂದು ಮನೆಯಲ್ಲಿ ಹೆಣ್ಣು ಮಗಳು ಈ ಇನ್ಸೂರೆನ್ಸ್ ನಿಂದ ಯಾವುದೇ ರೀತಿಯ ಸೌಲಭ್ಯ ಪಡೆದುಕೊಳ್ಳಲು ಆಗುತ್ತಿಲ್ಲ ಎಂಬ ವಿಷಯವು ಕೂಡ ಬೆಳಕಿಗೆ ಬಂದಿತ್ತು.
2210 ನಂಬರ್ ಅಕೌಂಟ್ ಅಂದರೆ ವೈದ್ಯಕೀಯ ಮತ್ತು ಜನಾರೋಗ್ಯಕ್ಕೆ ಸಂಬಂಧಪಟ್ಟದ್ದಾಗಿದೆ. ಈ ನಂಬರ್ ಯಾವಾಗಲೂ ಇರುತ್ತದಾ ಅಥವಾ ಬದಲಾಗುತ್ತದ ಎಂದು ಸ್ವಾತಿ ಅವರು ಪ್ರಶ್ನಿಸಿದಾಗ ಇಲ್ಲ ಇದೆ ನಂಬರ್ ಇರುತ್ತದೆ ಎಂದರು.
9ಡಿಜಿಟ ಈಸ್ ಕಾಮನ್ ಎಂದರು.
ಈ ವಿಷಯವನ್ನು ತಿಳಿಯಲು ನಾವು ಅಥವಾ ಇದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು CAG website &LMNH ನಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿದರು.
ಎಲ್ಲವನ್ನು ಬಿಟ್ಟುಕೊಡಲು ಬಿಬಿಎಂಪಿಗೆ ಕೇಂದ್ರ ಸರ್ಕಾರ ಬಿಡುತ್ತಿಲ್ಲ ಎಂಬ ಅಂಶವನ್ನು ಕೂಡ ತಿಳಿಸಿದರು.
ಇದರ ಜೊತೆಗೆ information is power ಎಂಬ ಮಾತನ್ನು ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ನಾವು ಇದರ ಬಗ್ಗೆ ಪ್ರಶ್ನೆ ಮಾಡಬಹುದು ಎಂದರು.
ನಾವು ಚರ್ಚೆ ಮಾಡಿದ ವಿಷಯಗಳು ವ್ಯಕ್ತಿ ಆಧಾರಿತವಾಗಿದೆ ಆದರೆ ಇವೆಲ್ಲವೂ ವ್ಯವಸ್ಥೆ ಆಧಾರಿತವಾಗಬೇಕು ಎಂದರು.
ರಾಜ್ಯದ ಒಟ್ಟು ಉತ್ಪನ್ನ ಮತ್ತು ಎಷ್ಟು ಉತ್ಪಾದಿಕೆಯ ಸಂಕೇತವಿದೆ ಎಂಬುದನ್ನು ಜಿ ಎಸ್ ಡಿ ಪಿ ಮೂಲಕ ಪಡೆದುಕೊಳ್ಳಬಹುದು ಎಂದರು.
ಹಾಗೆಯೇ ರೆವೆನ್ಯೂ ಮತ್ತು ಓಡಿಪಿ ಹಾಗೂ ಎಪಿಡಿ ಹಾಜರಾತಿಯನ್ನು ನಾವು ಪರಿಗಣನೆ ಮಾಡಬೇಕು ಎಂದರು.
ಹಾಗೆ ನಾವು ಆರೋಗ್ಯದ ಕುರಿತು ಯಾವುದೇ ರೀತಿಯ ವಿಷಯವನ್ನು ಪ್ರಶ್ನಿಸಲು ಅಥವಾ ಕೇಳಲು ಹೊರಟಾಗ ನಾವು ಇದರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಬಜೆಟ್ ವಿಚಾರವನ್ನು ಕೂಡ ಚೆನ್ನಾಗಿ ಅರ್ಥೈಸಿಕೊಂಡು ನಂತರ ನಾವು ದಾಖಲೆಗಳನ್ನು ಇಟ್ಟುಕೊಂಡು ನಾವು ತಳ ಹಂತದ ಮೂಲಕ ಒಂದ್ ಪ್ರಶ್ನೆಸಲು ಸಾಧ್ಯವಾಗುತ್ತದೆ ಎಂಬ ಅಂಶವನ್ನು ತಿಳಿಸಿದರು.
ನನಗೆ ಈ ಸಭೆಯಲ್ಲಿ ಅರ್ಥವಾಗಿದ್ದಂತದ್ದು ಇಷ್ಟು ಅಂಶಗಳು ಒಂದು ವೇಳೆ ಯಾವುದಾದರು ಮಾಹಿತಿ ಬಿಟ್ಟಲ್ಲಿ ಅಥವಾ ಇದು ಸರಿ ಇಲ್ಲ ಎಂದೆನಿಸಿದಲ್ಲಿ ದಯವಿಟ್ಟು ಮನ್ನಿಸಿ